ಕೇಂದ್ರದಿಂದ ಮಹತ್ವದ ನಿರ್ಧಾರ.. ಬಿಸಿಸಿಐಗೆ ಬಿಗ್​ ಶಾಕ್​ ಕೊಟ್ಟ ಪ್ರಧಾನಿ ಮೋದಿ!

author-image
Ganesh Nachikethu
Updated On
ಕೇಂದ್ರದಿಂದ ಮಹತ್ವದ ನಿರ್ಧಾರ.. ಬಿಸಿಸಿಐಗೆ ಬಿಗ್​ ಶಾಕ್​ ಕೊಟ್ಟ ಪ್ರಧಾನಿ ಮೋದಿ!
Advertisment
  • ಬಿಸಿಸಿಐ ಕೋಟಿಗಟ್ಟಲೇ ಆದಾಯ ತರುತ್ತಿದ್ದ ಜಾಹೀರಾತು ಇದು
  • ಪ್ರಧಾನಿ ಮೋದಿ ನೇತೃತ್ವದ ಸರ್ಕಾರದಿಂದ ಮಹತ್ವದ ನಿರ್ಧಾರ..!
  • ಮೋದಿ ಸರ್ಕಾರದ ನಿರ್ಧಾರದಿಂದ ಬಿಸಿಸಿಐಗೆ ಕೋಟಿ ಕೋಟಿ ನಷ್ಟ

ಮಹತ್ವದ ಬೆಳವಣಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಡೀ ದೇಶಾದ್ಯಂತ ಗುಟ್ಕಾ, ತಂಬಾಕು ಮತ್ತು ಪಾನ್ ಮಸಾಲಾ ಉತ್ಪನ್ನಗಳ ಜಾಹೀರಾತಿಗೆ ಕಡಿವಾಣ ಹಾಕಲು ಮುಂದಾಗಿದೆ ಅನ್ನೋ ಮಾಹಿತಿ. ಹಾಗಾಗಿಯೇ ಇನ್ಮುಂದೆ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಯಾವುದೇ ಕಾರಣಕ್ಕೂ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ತಂಬಾಕು ಮತ್ತು ಗುಟ್ಕಾ ಸಂಬಂಧ ಜಾಹೀರಾತು ನೀಡಬಾರದು ಎಂದು ಸೂಚನೆ ನೀಡಲು ತಯಾರಿ ನಡೆಸಿಕೊಂಡಿದೆ.

ಇನ್ನು, ತಂಬಾಕು ಮತ್ತು ಗುಟ್ಕಾ ಜಾಹೀರಾತಿನಿಂದ ಬಿಸಿಸಿಐಗೆ ಕೋಟಿಗಟ್ಟಲೇ ಆದಾಯ ಬರುತ್ತಿದೆ. ಪ್ರಧಾನಿ ಮೋದಿ ಸರ್ಕಾರದ ಈ ನಿರ್ಧಾರದಿಂದ ಬಿಸಿಸಿಐ ಬೊಕ್ಕಸಕ್ಕೆ ಭಾರೀ ನಷ್ಟವಾಗಲಿದೆ ಎಂದು ತಿಳಿದು ಬಂದಿದೆ.


">July 15, 2024

ಈ ಸಂಬಂಧ ಮಾಧ್ಯಮದವರೊಂದಿಗೆ ಮಾತಾಡಿರೋ ಕೇಂದ್ರ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿ ಒಬ್ಬರು, ದೇಶಾದ್ಯಂತ ಕೋಟ್ಯಾಂತರ ಪಾನ್ ಶಾಪ್‌ಗಳಿವೆ. ಹಾಗಾಗಿ ಗುಟ್ಕಾ ನಿಷೇಧಕ್ಕಾಗಿ ಈ ನಿರ್ಧಾರಕ್ಕೆ ಬಂದಿದ್ದೇವೆ. ಈಗಾಗಲೇ ಅನೇಕ ಅಂಗಡಿಗಳು ಅದರ ಮಾರಾಟವನ್ನು ನಿಲ್ಲಿಸಿವೆ. ಗುಟ್ಕಾ, ತಂಬಾಕಿನಿಂದ ಲಕ್ಷಾಂತರ ಕುಟುಂಬಗಳು ಬೀದಿಗೆ ಬಂದಿವೆ. ಹಾಗಾಗಿ ಬಿಸಿಸಿಐಗೂ ಇನ್ಮುಂದೆ ತಂಬಾಕು ಜಾಹೀರಾತು ನೀಡದಂತೆ ಸೂಚನೆ ನೀಡಲಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ:ಗಂಭೀರ್​​ ಕೋಚ್​​ ಆಗುತ್ತಿದ್ದಂತೆ ಸಂಜುಗೆ ಜಾಕ್​ ಪಾಟ್​​.. ಬದಲಾಯ್ತು ಸ್ಯಾಮ್ಸನ್​​ ಲಕ್​​!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment